'ಬದುಕು'
ಮುಂಜಿನ ಹನಿಗಳನ್ನು ತನ್ನ ನುಣುಪಾದ ಕೋಮಲವಾದ ಮೈಯಲ್ಲಿ ಹೊತ್ತು ನಿಂತಿದ್ದ ಆ ಹೂವೂ, ಆಗ ತಾನೇ ಜಗತ್ತಿಗೆ ತನ್ನ ಪರಿಚಯ ಮಾಡಿಕೊಳ್ಳಲು
ಬರುತ್ತಿದ್ದ ಬಾಲಭಾಸ್ಕರನ ಮೊದಲ ನೋಟಕ್ಕೆ ನಾಚಿ ನೀರಾಗಿ ಬಾಗಿ, ತನ್ನಲ್ಲಿ ತುಂಬಿದ ಸಂತೋಷದ ಅಮೃತಧಾರೆಯನ್ನು ಭೂತಾಯ ಮಡಿಲಿಗೆ ಸುರಿಸುತ್ತಾ, ಸ್ಥಾನಪಲ್ಲಟಗೊಂಡು ನಿಧಾನಗತ್ತಿಯಲ್ಲಿ ತನ್ನ ಮೊದಲ
ಸ್ಥಾನಕ್ಕೆ ಬಂದಂತೆ, ಲೋಕದ ಮತ್ತು ತನ್ನ ಕಣ್ಣಿನ
ಮಧ್ಯೆ ಇರುವ, ಆ ಭಾರವಾದ ಕಂಬನಿಯೊಂದಿಗೆ ಮನದಾಳದ ನೋವನ್ನು ಕಳುಹಿಸಿ, ನಿಡುಸುಯ್ದು ಮೇಜಿನಿಂದ ಮೇಲಕ್ಕೆ ತಲೆ ಎತ್ತಿದಾಗ ನನ್ನ ಮುಂದೆ ಸಹದ್ಯೋಗಿ ಸುಮಾ, ಸುಮಾರು ಒಂಭತ್ತೂವರೆ ತಿಂಗಳ ಕಾಲ ಒಂದು ಜೀವವನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು, ಅದು ಹೊರ ಬಂದಾಗ, ಅದಕ್ಕೆ ತನ್ನ ಮೊಲೆ ಹಾಲು
ಕೊಡಲು ಸಾಧ್ಯವಾಗದೆ ಇದ್ದಾಗ ಆ ತಾಯಿ ತನ್ನ
ಮಗುವನ್ನೂ ನೋಡುವ ಹಾಗೆ ಆ ಎರಡು ಚಿಗರೆಕಂಗಳು ನನ್ನನ್ನೇ ದಿಟ್ಟಿಸುತ್ತಿದ್ದವು.
ಆ ದಿನ ನಾನು ನನ್ನ ಜೀವನದ ಎರಡನೆಯ ಘಟ್ಟದಲ್ಲಿನ ಜೀವನವನ್ನೂ ಆರಂಭಿಸಿ ಮೂರನೆಯ
ದಿನಕ್ಕೆ ಕಾಲಿಟ್ಟಿದ್ದೆ. ಸುಮಾರು
ಹದಿನೈದು ವರುಷಗಳ ಕಾಲ, ಹೊಟ್ಟೆಗೆ ಚಂಡಿ ಬಟ್ಟೆ ಕಟ್ಟಿ, ರಜಾ ದಿನಗಳನ್ನು ಯಾರದೋ ಶ್ರೀಮಂತರ
ಕೈ ಕೆಳಗೆ ಜೀವನವನ್ನೂ ಇಂಗಿಸಿ, ಹಲಾವಾರು ಜಟಿಲ ಸಮಸ್ಯೆಗಳನ್ನು ಅಂದರೆ ಮೊದಲ ಹಂತದ ಕಲಿಯುವಿಕೆಯ ಸಂದರ್ಭ, ನನ್ನ ತೇಪೆ ಹಾಕಿದ, ಪಟ್ಟೆನೂಲಿನಲ್ಲಿ ಸಿಕ್ಕಿಸುತ್ತಿದ್ದ ಅಂಗಿ ಚಡ್ಡಿಗಳನ್ನು ನೋಡಿ ಕೇಕೆ ಹಾಕಿ ನಮ್ಮನ್ನು
ಶೋಷಣೆಗೊಳಪಡಿಸುತ್ತಿದ್ದ ಕಾಲ. ಹಾಗೆಯೇ ಮುಂದೆ ಎರಡನೆಯ
ಹಂತದಲ್ಲಿ ಶ್ರೀಮಂತ ಟೀಚರುಗಳು ಶ್ರೀಮಂತ ಮಕ್ಕಳಿಗೆ ಎಲ್ಲವನ್ನೂ ಹೆಚ್ಚಾಗಿ ಕೊಡುತ್ತ, ಬಡಮಕ್ಕಳನ್ನೂ ಮತ್ತೂ
ಬಡವರನ್ನಾಗಿಸುತ್ತಿದ್ದ ಸಂದರ್ಭವನ್ನೆಲ್ಲಾ ಸಮಾಧಾನದಿಂದ ಗೆದ್ದು ಕ್ಯಾಂಪಸ್
ಸೆಲೆಕ್ಷನ್ನಲ್ಲಿ ಸೆಲೆಕ್ಟಾಗಿ, ಅಲ್ಲೂ ಕೂಡ ಕಂಪನಿಗಳ ಲಂಚದ ಅವತಾರ ಕಂಡು, ಪೋಸ್ಟ್ ಆಫೀಸು ಮತ್ತು
ಧನಿಗಳಲ್ಲಿ ಅಕೌಂಟ್ ಬ್ಯಾಲೆನ್ಸ್ ಮಾಡಿ, ಮನೆಯ ಮಾಡಿಗೆ ಬಳಸಿದ ಬಿದಿರಿನಲ್ಲಿ ಸುಮಾರು ಆರು ವರುಷಗಳ ಕಾಲದಿಂದ ತುಂಬಿದ್ದ ಚಿಲ್ಲರೆ
ಪೈಸೆಗಳನ್ನು ಜೋಡಿಸಿ, ಒಂದು ವಾರದ ಹಿಂದೆ ಕಂಪೆನಿಗೆ 'ಮುಡಿ' ಅರ್ಪಿಸಿ ಕೆಲಸ
ಗಿಟ್ಟಿಸಿಕೊಂಡಿದ್ದ.
ಮೊದಲೇ ಖಾಲಿಯಾಗಿದ್ದ ಮನೆಯಲ್ಲಿ ಏನೂ,
ಅಂದರೆ
ಒಂದು ಹೊತ್ತಿನ ಒಂದು ತುತ್ತಿಗೆ ಪರದಾಡಿದರೂ,
ಪರದಾಟ ಮಾತ್ರ ಕಂಡು ಬಂದಿತ್ತಷ್ಟೇ. ಮೂರು ದಿನದಿಂದ ತನ್ನ ದೇಹ ನೀರು ಬಿಟ್ಟು ಮತ್ತೇನನ್ನೂಕೇಳಿರಲ್ಲಿಲ್ಲ,
ತುಂಬಿಸಿಕೊಳ್ಳುತಿರಲಿಲ್ಲ.
ನನ್ನ ಮನಸ್ಸು ಒಪ್ಪಿದರೂ, ಹುರುಕುಗಾಡಿ, ಈ ಹುರುಕಲು ದೇಹ ಕೇಳಬೇಕಲ್ಲ,
ಆಫೀಸಿನ
ಒಳಗೆ, ದೇಹ ತಲೆಯನ್ನು, ಭೂ ತಾಯಿಯನ್ನು ಮುಚ್ಚಿದ ಟೈಲ್ಸಿಗೆ ಮೆಲ್ಲನೇ.....
ಹೊಡೆದಿತ್ತು. ಕಣ್ಣು ಕತ್ತಲೆಯಲ್ಲಿ ಮಾಯವಾಗಿತ್ತು.
ಎಷ್ಟು ಹೊತ್ತು ಕಳೆಯಿತೆಂದು ತಿಳಿಯಲಿಲ್ಲ.ಆಗ, ಆಗ ತಾನೇ ನನ್ನೊಂದಿಗೆ ಕಂಪೆನಿಗೆ ಸೇರಿದ್ದ ಸುಮಾ ಇದೀಗ ಪರಿಚಯವಾದರೂ ಆಕೆ ನನ್ನ ಮೇಲೆ ನೀರು ಚಿಮುಕಿಸಿ, ಉಪಚರಿಸಿದ್ದಳು. ಮುಂದೆ ಅವಳ ಮಾತಿಗೆ ಸೊಪ್ಪು ಹಾಕಲಾಗದೆ ನನ್ನ ಜೀವನದ ಚರಿತ್ರೆಯನ್ನು ಅವಳಿಗೆ ತಿಳಿಸಿದ್ದೆ.
ನಂತರ ಒಮ್ಮೆಲೆ ಎಚ್ಚೆತ್ತೆ. ಸುಮಾ
ಅಪ್ಯಾಯ ಮಾನತೆಯಿಂದ ನನ್ನ ಕೈಯೊಳಗೆ ತನ್ನ ಕೈಯನ್ನೂ ಸೇರಿಸಿ ವೆಯಿಟಿಂಗ್ ರೂಮಿಗೆ ಕರೆದುಕೊಂಡು ಹೋದಳು. ನಾನು ಯಂತ್ರ ಮಾನವನಂತೆ ಕಂಡು
ಬರುತ್ತಿದ್ದೇನೋ ಏನೋ, ಆಕೆ ನನ್ನ ಕೈ ತೊಳೆಸಿ, ತನಗಾಗಿ ಮಧ್ಯಾಹ್ನಕ್ಕಾಗಿ ತಂದಿದ್ದ ಚಿತ್ರಾನ್ನವನ್ನು
ಕೈಯಲ್ಲಿ ಕಲಸಿ ತುತ್ತನ್ನು ನನ್ನ ಬಾಯಿಗಿರಿಸುತ್ತಿದ್ದು
ಅದು ಖಾಲಿಯಾಗಿದ್ದೆ ತಿಳಿಯಲಿಲ್ಲ. ಪಾಪ ಅವಳು ತನ್ನ ಹಸಿವನ್ನು, ನನ್ನ ಹಸಿವು
ಇಂಗಿಸುವುದರೊಂದಿಗೆ ನೀಗಿಸಿದ್ದಳು.
ಮೂರು ದಿನ ಏನೂ ತಿನ್ನದ ನನ್ನ ಹೊಟ್ಟೆಗೆ "ಬಕಾಸುರನ ಹೊಟ್ಟೆಗೆ ಅರೆಕಾಸಿನ
ಮಜ್ಜಿಗೆ ಎಂಬಂತೆಯಾದರೂ, ಅವಳಲ್ಲಿನ ಆ ಪ್ರೀತಿ, ಮಮತೆ, ಆ ವಾತ್ಸಲ್ಯದಿಂದ ನನ್ನ ಹೊಟ್ಟೆ
ತುಂಬಿತ್ತು. ಮನಸ್ಸೂ ಕೂಡ ತುಂಬಿ ಬಂದಿತ್ತು.ಆಕೆಯ ಮುಖವನ್ನೂ
ನಾನು ಏಕೋ ದಿಟ್ಟಿಸಿ ನೋಡಿದಾಗ ಆ ಮುಖದಲ್ಲಿ ಯಾವುದೋ ಒಂದು ವಿಷಾದ ಛಾಯೆ ತುಂಬಿದಂತೆ ಕಂಡುಬರುತ್ತಿತ್ತು. ಮುಂದೆ ಅವಳು ನನ್ನ ಕೈ ತೊಳೆಸಿ, ನೀರು ಕುಡಿಸಿ, ಅವಳೂ ಕುಡಿದು ಹೊಟ್ಟೆ ತುಂಬಿಸಿದ್ದಳು. ಅವಳಲ್ಲಿ ಊಟ ಮಾಡಲು ಹೇಳಿದರೂ, ಅವಳ ಕೈಯ ತುತ್ತು ಮಾತ್ರ ನನ್ನ
ಹೊಟ್ಟೆಗೆ
ಇಳಿದಿತ್ತು.
ಮಧ್ಯಾಹ್ನದ ಮೇಲೆ ರಜೆ ಇದ್ದ ಕಾರಣ ಅವಳು ನನ್ನನ್ನು ನಾಲ್ಕು ಬೆಂಚು ಹಾಸಿರುವ ಬೇಲಿ ಇಲ್ಲದ
ಪಾರ್ಕೊಳಗೆ, ಅವಳು (ಅವಳ ಮನಸ ಬೇಲಿಯೊಳಗೆ ನನ್ನ) ಕರೆದುಕೊಂಡು ಹೋದಳು.
ಮುಂದೆ ಹೇಗೋ ನನ್ನ ಬಾಲ್ಯ ಜೀವನವನ್ನೂ ನನ್ನ ಬಾಯಲ್ಲೇ ಹೇಳಿಸಿಕೊಂಡಿದ್ದಳು. ನಂತರ ನನ್ನ
ಮಾತಿಗಾಗಿ, ನನಗಾಗಿ, ನನ್ನ ಎದುರಲ್ಲೇ ಅವಳು ಅವಳ ಗತ ಜೀವನದ ವೈಭವವನ್ನು, ಒಂದೊಂದೇ ಬಾಲ ಪುಟಗಳನ್ನು ತಿರುವಿ ಹಾಕುತ್ತಾ, ನನ್ನ ಕಣ್ಣಿಗೆ ಕಟ್ಟಿದಂತೆ
ಹೇಳುತ್ತಿದ್ದಳು. ಅವಳ ಜೀವನದ 'ಥಿಯರಿ'ಗಳು ನನ್ನನ್ನು ಬೇರೆಯೇ ಲೋಕಕ್ಕೆ
ರವಾನಿಸಿತ್ತು. ಅವಳಲ್ಲಿ ಕಣ್ಣೀರಕೋಡಿ ಹರಿಯುತ್ತಿದರೇ ನಾನು ಅಲ್ಲಿಯೇ ಕಲ್ಲಿನಂತಾಗಿದ್ದೆ. ಅವಳ ಜೀವನದ ಘಟನೆಗಳು ಸತ್ಯಕ್ಕೂ, ಸುಳ್ಳಿಗೂ ಅಂತರವೇ ಇಲ್ಲ ಎಂಬಂತಿತ್ತು.
ಹಳ್ಳಿ-ಪೇಟೆಯ ಮಧ್ಯೆ ಬೆಳೆದ ರಘುವಿಗೆ ಪೇಟೆಯ ರುಚಿ ಹತ್ತಿ, ದೂರದ ಹಳ್ಳಿಯ ಬೆಡಗಿಯೊಬ್ಬಳನ್ನು ನೋಡಿ ಮದುವೆಯಾಗಿದ್ದ. ಆತ ನೋಡಲು ಸುಂದರವಾಗಿದ್ದು ಲಕ್ಷಣವಾಗಿದ್ದ. ಹೆಂಡತಿಯಾಗಿ
ಬಂದಿದ್ದ ಅಮೃತಾಳು ಕೂಡ ದಷ್ಟ ಪುಷ್ಟವಾಗಿ ಬೆಳೆದು
ರೂಪವಂತೆಯಾದ ತರುಣಿಯಾಗಿದ್ದಳು. ಮದುವೆಯ ಮೊದಲ ದಿನವೇ ಸಂಶಯಗೊಂಡಿದ್ದ ಅಮೃತಾಳುಎರಡು ವಾರದೊಳಗೆ ಸೊರಗಿ ಬೆಂಡಾಗಿದ್ದಳು.ಎರಡು ವಾರದ
ಹಿಂದಿನ ಅಮೃತಾಳಿಗೂ ಈಗಿನ ಇವಳಿಗೂ ಅಜಗಜಾಂತರ
ವ್ಯತ್ಯಾಸ. ಕಾಂತಿ ಹೀನ ಮುಖ ಒಣಗಿದ ತುಟಿ,
ಕೆದರಿದ
ಕೂದಲು ಅವಳ ಪರಿಸ್ಥಿತಿಯನ್ನು ಎತ್ತಿ
ತೋರಿಸುತ್ತಿತ್ತು.
ಎರಡು ವಾರದಲ್ಲೇ ಅಮೃತಾ ಸಣಕಲಾಗಿದ್ದಾಳೆ. ಇದು ರಘುವಿನಿಂದ. ಮೊದಲ ದಿನ ಹಲವು
ಕಾರಣಗಳಿಂದ ಹೆಂಡತಿಯಿಂದ ದೂರ ಇದ್ದ ಈತ, ಮುಂದಿನ ದಿನಗಳಲ್ಲಿ ಅವನು ಅಮೃತಾಳನ್ನು ಹಿಂದಿ ಹಿಪ್ಪೆಯನ್ನಾಗಿಸಿದ್ದ. ಎಲ್ಲಾ ಚಟಗಳನ್ನು ಮೈಗೂಡಿಸಿಕೊಂಡಿದ್ದ ಈತ ಎರಡು ವಾರದಲ್ಲಿ ಅಮೃತಾಳನ್ನು ಮೃಗೀಯವಾಗಿ ನಡೆಸಿಕೊಂಡಿದ್ದ.
ಮೊದಲೇ ಊರಿನ ಹುಡುಗಿಯರ, ಹೆಂಗಸರ ಮೇಲೆ ದಾಳಿ ನಡೆಸಿದ್ದ
ಈತ, ಒಳ್ಳೆಯ ಸಂಪ್ರದಾಯಸ್ಥ
ಕುಟುಂಬದಲ್ಲಿ ಹುಟ್ಟಿ ಬಂದಿದ್ದ ಅಮೃತಾಳ
ಜೀವನವನ್ನು ಮೈಲಿಗೆಗೊಳಿಸಿದ್ದ. ಮುಂದೆ ಒಂದು ವರ್ಷದ ಹಿಂದಷ್ಟೇ ದೇವರ ಪಾದ ಸೇರಿದ್ದಳು. ಮನೆಯಲ್ಲಿ ಈಗ ಹಿರಿಯವಳು ಸುಮ ಕಿರಿಯವ ಸುಮನ್.
ಇತ್ತೀಚಿಗೆ ರಘು ಮನೆ ಕಡೆ ಬರುತ್ತಿರುವುದು ಕಡಿಮೆಯಾಗಿದ್ದು, ಆಸ್ತಿ ಸ್ವಲ್ಪವಿದ್ದ ಕಾರಣ ಸುಮ, ಸುಮನ್ ಗೆ ಹಣದ ಬಗ್ಗೆ ಅಷ್ಟೊಂದು ತೊಂದರೆ
ಇರಲಿಲ್ಲ. ಈರ್ವರೂ ಮನೆಯ ಕಡೆ ನೋಡಿಕೊಂಡು,
ಶೈಕ್ಷಣಿಕವಾಗಿ
ಅವರ ಮಾವನ ಸಹಾಯದಿಂದ ತಂದೆ
ಎಂಬುದನ್ನು ಮರೆತು ಬೆಳೆಯುತ್ತಿದ್ದರು. ಒಂದು ದಿನ ಮಧ್ಯ ರಾತ್ರಿ ಬಾಗಿಲು ಬಡಿದಾಗ ಇವರಿಬ್ಬರಿಗೂ ಒಳ್ಳೆ ನಿದ್ದೆ. ನಂತರ ಸುಮ ಬಂದು ಬಾಗಿಲು ತೆರೆದಾಗ
ಎದುರು ತೂರಾಡುತ್ತಾ ನಿಂತಿರುವ ತಂದೆಯನ್ನು ಕಂಡಳು.
ಆತ ಒಳ ಬಂದ ನಂತರ ಚಿಲಕ ಹಾಕಿ ತಿರುಗಿದಾಗ ತಂದೆ ತನ್ನನ್ನೇ ನೋಡುವುದು ಕಾಣುತ್ತಿತ್ತು. ಈಗ ರಘುವಿನ ಮುಂದೆ ತ್ರೀಲೋಕ ಸುಂದರಿ, ರತಿಯೇ ಎಂಬಂತಿರುವ, ಮೈತುಂಬಿಕೊಂಡು ಎಲ್ಲರ ಕಣ್ಣು
ಕುಕ್ಕುವಂತಿದ್ದ ಸುಮಾ. ಇವಳಿಗೆಕೋ ಗಾಬರಿ,
ಅವನನ್ನು
ದಾಟಿ ಮುಂದಡಿಯುತ್ತಿದ್ದಂತೆ ಆತ
ಅವಳನ್ನು ತನ್ನ ತೋಳಲ್ಲಿ ಬಿಗಿದು ಮುಂದುವರಿದಾಗ ಅಪ್ಪಾ!? ಎಂದು ಆಶ್ಚರ್ಯದಿಂದ
ಪ್ರಶ್ನಾರ್ಥಕವಾಗಿ ಕೇಳಿ ಬೊಬ್ಬಿಡತೊಡಗಿದಳು. ಆಗ ಆತ ಯಾರೇ ನಿನ್ನ ಅಪ್ಪ, ನಾನು ಅಪ್ಪನೂ ಅಲ್ಲ ನೀನು ಮಗಳೂ ಅಲ್ಲ, ಲೋಕದಲ್ಲಿ ಗಂಡು-ಹೆಣ್ಣು ಎಂಬ ಸಂಬಂಧ ಮಾತ್ರ ಎಂದು ತನ್ನ ಮೃಗೀಯ ಕಾಮವರ್ತನೆಯನ್ನು ಸಮರ್ಥಿಸಿಕೊಂಡ ಅದೂ ಕೂಡ ಸಂಪೂರ್ಣ ಕುಡಿದ ಮತ್ತಿನಲ್ಲಿ ಮಗಳು, ಅಪ್ಪನಿಗೆ ನಾಚಿಕೆ ಇಲ್ಲ ಎಂದಾಗ, ಆತ ನಾಚಿಕೆ! ಅದು ನನಗಾ ನಿನಗಾ? ನನಗಂತೂ ಅದು ಯಾವುದೂ ಗೊತ್ತೇ ಇಲ್ಲ ನನಗೆ ತಿಳಿದಿರುವುದು ಒಂದೇ ಎಂದು ಅವಳ ಬಾಯಿ ಮುಚ್ಚಿಸಿದ್ದ. ದಾವಣಿ ಬಾಗಿಲ
ಮೂಲೆಯಲ್ಲಿ ತನ್ನ ಪಾಡಿಗೆ ತಾನು ಬಿದ್ದಿತ್ತು.
ರಘು ಎಂಬ ಪಿಶಾಚಿ ತಂದೆ-ಮಗಳ
ಸಂಬಂಧಕ್ಕೆ ಬೆಂಕಿ ಹಚ್ಚಿತ್ತು. ಆತ ತೃಪ್ತನಾದರೆ ಹುಡುಗಿ ಹತಾಶಳಾಗಿ, 'ಹಿಸ್ಟೆರಿಕ್' ಆಗಿ ಎಚ್ಚರ ತಪ್ಪಿದ್ದಳು.
ಯಾರೂ ಊಹಿಸಲಾಗದ ಅಮಾನವೀಯ, ಹೇಯ ಕೃತ್ಯ ಅಲ್ಲಿ ನಡೆದು ಹೋಗಿತ್ತು. ಹೆಣ್ಣು ಈಗ ಯಾರನ್ನು ಕೂಡ ನಂಬುವ ಹಾಗಿರಲಿಲ್ಲ. ಜಗತ್ತಿನ ಮಧುರ ಪ್ರೀತಿಯನ್ನು ರಘು ಛಿದ್ರ ಛಿದ್ರ ಗೊಳಿಸಿದ್ದ.
ಆಕಳಂಕ, ನಿರ್ಮಲ, ಅಚ್ಚ ಬಿಳಿಯ ಸಂಬಂಧದಲ್ಲಿ ಎಂದೂ ಅಳಿಸಲಾಗದ ಕಳಂಕ ರಘು ಕೊರೆದಿದ್ದ. ಜಗತ್ತಿನ
ಪಿತೃಗಳೆಲ್ಲಾ ತಲೆ ತಗ್ಗಿಸುವಂತೆ 'ಪಿತೃತ್ವ' ವನ್ನೇ ಈತ ಕೊಂದಿದ್ದ.
ನಂತರ ಈತ ಎಲ್ಲೊತಲೆ ಮರೆಸಿಕೊಂಡು ಊರಿಂದಲೇ ಜಾಗ ಖಾಲಿ ಮಾಡಿದ್ದ.
ಸುಮ ಸುಮನ್ ರು ಐದಾರೂ ವರ್ಷದಿಂದ
ಮೊದಲನೇ ಹಂತಕ್ಕೆ ತಲುಪುವಲ್ಲಿ ಪಕ್ಕದ ಮನೆಯವರ, ಅವರ ಮಾವನ ಮನೆಯವರ ಬೆಂಬಲ, ಸಹಾಯ ದೊರೆತ್ತಿತ್ತು. ಸುಮಾ ಕೂಡಾ ಹಿಂದಿನ ಘಟನೆ ಮರೆತು ಎಲ್ಲರಂತೆ ಓಡಾಡುತ್ತಿದ್ದಳು. ಸುಮನ್ ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ.
ಜೋರಾಗಿ ಅಳುತ್ತಿದ್ದ ಸುಮಾಳನ್ನು
ನೋಡಿದಾಗಲೇ ತಿಳಿದದ್ದು ಕನಸಲ್ಲ ನನಸು ಎಂದು. ನಾನು ಅವಳ ತಲೆ ನೇವರಿಸಿ ಅವಳನ್ನು ಸಾಂತ್ವನಗೊಳಿಸಿದಾಗ ಮುಂದಿನ ಬಾಳು ಏನು ಎಂದು ಶೂನ್ಯ
ದೃಷ್ಟಿಸುತ್ತಿದ್ದಳು. ಆಗಲೇ ನಾನು ಅವಳ ರೂಪ, ಲಾವಣ್ಯ,ಅವಳ ಗುಣ ನಡತೆ, ಹೃದಯವಂತಿಕೆ, ಪ್ರೀತಿ-ವಾತ್ಸಲ್ಯ ಕಂಡು
ಮನಸೋತ್ತಿದ್ದೆ. ಕಣ್ಣುಗಳಲ್ಲೇ ಅವಳಿಗೆ
ಸೂಚನೆಯಿತ್ತು. ಅವಳ ಮನಸ್ಸನ್ನು ಕದ್ದು ಗೆದ್ದಿದ್ದೆ. ಅಳಿವಿನ ಅಂಚಿನಲ್ಲಿ ನಿಂತಿದ್ದ ಒಂದು ಜೀವವನ್ನು ಮೇಲೆತ್ತಿದ್ದ ಸಮಾಧಾನ ನನ್ನಲ್ಲಿತ್ತು.
ಅವಳನ್ನು ನೋಡಿದ ನನ್ನ ಅಪ್ಪ-ಅಮ್ಮ ಕೂಡ,
ನಮ್ಮನ್ನು
ಮೆಚ್ಚಿ ಅಕ್ಷತೆ ಕಾಳುಹಾಕಿ ಹರಸಿದ್ದರು. ಈಗ ಉದ್ಯಾನನಗರಿಯಲ್ಲಿ ಜೋಡಿ
ಹಕ್ಕಿಯಂತೆ ದೋಣಿ ಸಾಗುತ್ತಿದೆ. ಆದರೂ ಏನೊಂದು ವಿಚಿತ್ರ ಆಲ್ವಾ ಈ 'ಬದುಕು'.
ಆದರೂ 'ಬದುಕು' ಅಂದರೆ?! ಏನಿದರ ನಿಜವಾದ ಅರ್ಥ!






