ಗುರುವಾರ, ಮಾರ್ಚ್ 27, 2014

ಪ್ರೀತಿ ಎಂದರೆ ............!? ಪ್ರೀತಿಸುವವರಿಗಾಗಿ……..


 

          ಪ್ರೀತಿಯೆಂಬ ನೀರೀಗೆನಾದರೂ ಬೇರು ಎಂಬುದಿದ್ದರೆ ಬೇರಿನ ಕೊನೆಯೊಳಗೆ ಒಂದು ಚಿಕ್ಕ ಹನಿಯಿದೆ, ಇರಲೇ ಬೇಕಲ್ವಾ. ಹನಿಯನ್ನು ಕೇಳಿದರೆ ಹೇಳಬಹುದು 'ಪ್ರೀತಿಯೋಳಗೆನಿದೆ' ಎಂಬುದನ್ನು ಖಂಡಿತಾ! ಹೌದು, ಕೆಲವರಿಗೆ ಪ್ರೀತಿ ಪ್ರೇಮ ಅಂದರೇನು ಎಂಬುದು ತಿಳಿದಿಲ್ಲ. ಕೆಲವರಂತೂ,'ನಾವು ಬದುಕಿರೋದೇ ಪ್ರೀತಿ,ಪ್ರೇಮಕ್ಕಾಗಿ, ಜೀವನದಲ್ಲಿ ಅದೇ ಸಿಗದಿದ್ದರೆ, ಬದುಕಿ ಪ್ರಯೋಜನವಾದರೂ ಏನು? ಎಂಬ ಅರ್ಥದಲ್ಲಿರುತ್ತಾರೆ. ಹುಡುಗಿಯರು, ಹುಡುಗರು ಮಾತ್ರವಲ್ಲ ಎಲ್ಲರೂ ಬದುಕಿರುವುದೇ ಪ್ರೀತಿಗಾಗಿ!


ಪ್ರೀತಿ ಎಂದರೆ ನಮ್ಮ ಮನಃ ಪಟಲದಲ್ಲಿ ಮೂಡುವುದು ಅದೊಂದೇ ಪ್ರೀತಿ, ಅದೇ ಹರೆಯದ ಪ್ರೀತಿ. ಪ್ರೀತಿ ಎಂದರೆ ಇದೊಂದೇ ಅಲ್ಲ ಪ್ರೀತಿಯಲ್ಲೂ ಹಲವು ಪ್ರೀತಿ ಇದೆ!.............

ಪ್ರೀತಿ ಎoಬುದು ಅಮೂಲ್ಯ ಜೀವದ್ರವ್ಯ, ಜೀವನದ ಜೀವನಾಡಿ!, ಬದುಕಿನ ಒಂದು ಮೂಲ ಬಿಂದು! ಆದರೆ ದ್ರವ್ಯ ಒಂದು ಪ್ರೀತಿಯ ಸೋಲಿಗೆ ಬರಡಾಗುವುದಿಲ್ಲ. ಸುಲಭಕ್ಕೆ ಸೋರಿ ಹೋಗುವುದಿಲ್ಲ


ಪ್ರೀತಿ ಎoಬುದು ಮೊಗೆದಷ್ಟು ಹುಟ್ಟಿಕೊಳ್ಳುವ ಜೀವ ಚಿಲುಮೆ! ಯಾವನೋ (ಳೋ) ಕೈ ಕೊಟ್ಟ ಅಂತ ಜೀವ 'ದಾನ' ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಪ್ರೀತಿಗಿಂತ ದೊಡ್ಡದು ಬದುಕು. ಪ್ರೇಮಕ್ಕಿಂತ ಮಿಗಿಲಾಗಿದ್ದು ಜೀವನ!

ಪ್ರೀತಿಯ ಕುರಿತಾದ ಯಾವುದೇ ಪುಸ್ತಕ, ಸಿದ್ದಾಂತ ನೋಡಿದರೂ ಪ್ರೀತಿಗಾಗಿ ತಮ್ಮ ಆತ್ಮವನ್ನು ಅರ್ಪಿಸಿ, ಸಾಯಿರಿ ಎಂದು ಎಲ್ಲಿಯೂ ಯಾರು ಹೇಳಿಲ್ಲ. ಪ್ರೀತಿ ಸಿಗದಿದ್ದಾಗ ಅದಕ್ಕೆ ಅರಸಬೇಕೇ ಹೊರತು, ಸಿಗದ ಪ್ರೀತಿಗೆ ಕೊರಗಿ ಪ್ರಯೋಜನವಿಲ್ಲ. ಜೀವನವಿದ್ದರೆ ತಾನೆ, ಪ್ರೀತಿ, ಪ್ರೇಮ. ಜೀವನವೇ ಇಲ್ಲದಿದ್ದರೆ, ಪ್ರೀತಿ ಪ್ರೇಮ ಇರುವುದಾದರೂ ಹೇಗೆ?


ಪ್ರೀತಿಯೆಂಬುದು ಯಾವತ್ತೂ ಸಕಾರಾತ್ಮಕ. ಅದು ಎಂದಿಗೂ ಜೀವವಿರೋಧಿಯಲ್ಲ. ಪ್ರೀತಿಯಲ್ಲಿ ಯಾರೂ ಜೀವ ಹತ್ಯೆ ಮಾಡಿಕೊಳ್ಳಬಾರದು. ಜೀವನದಲ್ಲಿ ನಾವು ಬಯಸಿದೆಲ್ಲವೂ ಸಿಗುವುದಿಲ್ಲ.  ಹಾಗೆ ಸಿಗಲಿಲ್ಲವೆಂದು ಕನವರಿಸುವುದರಲ್ಲಿ ಅರ್ಥವೇ ಇಲ್ಲ. ಪ್ರೀತಿಯೊಂದೆ ಜೀವನವಲ್ಲ. ಜೀವನದಲ್ಲಿ ಪ್ರೀತಿ, ಪ್ರೇಮ ಅಲ್ಪ ಸ್ವಲ್ಪ ಪ್ರಮಾಣದ್ದು. ಜೀವನ ಇವೆಲ್ಲವನ್ನೂ ಮೀರಿದ್ದು!


 ಪ್ರೀತಿ ಅಂದ್ರೆ ಒಂದು ಅನುಭೂತಿ, ಪ್ರೀತಿ ಪೂರ್ತಿ emotional ಅಲ್ಲ. ಪ್ರೀತಿಯ ಬಗೆಗಿರುವ ಬಾಹ್ಯ ಪೊರೆಗಳನ್ನು ಕಳಚಿ ಬಿಸಾಕಬೇಕು.  ಪ್ರೀತಿಯ ಬಗೆಗಿರುವ ಸಿನಿಮಾ ಭಾವನೆಗಳನ್ನುಹೊಡೆದು ಹಾಕಬೇಕು. ಪ್ರೀತಿ ಅಂದರೆ ಒಂದು ಸುಂದರ ಗೆಳೆತನ ಅಂತ ಭಾವಿಸಲು ಶುರು ಮಾಡಿದರೆ, ಗೆಳೆತನ ಮುರಿದು ಬಿದ್ದರೆ ಯಾರೂ ಜೀವ ಹತ್ಯೆ ಮಾಡಿಕೊಳ್ಳುವುದಿಲ್ಲ.


ಕೆಲವು ಬಾರಿ ಪ್ರೀತಿ ಗುರುವಿನ ಹಾಗೆ! ಏಕೆಂದರೆಪ್ರೀತಿ ಎಲ್ಲಾವನ್ನೂ ಕಲಿಸುತ್ತದೆ.  ಸುಮ್ಮನೆ ಪ್ರೀತಿ ಮಾಡಬಾರದು, ಪ್ರೀತಿಯನ್ನರಿತು ಪ್ರೀತಿಸಬೇಕು. ಕೊನೆಗೂ, ಪ್ರೀತಿಗಾಗಿ ಬದುಕಿ (ಎಲ್ಲಾ ಪ್ರೀತಿ) ಬದುಕಿಗಾಗಿ ಪ್ರೀತಿಸಿ. ಈಗಲಾದರೂ ತಿಳಿಯಿತಲ್ವಾ 'ಪ್ರೀತಿ ಎಂದರೆ.......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ